ಮೈಸೂರಿನ ಆರೋಪಿಗಳನ್ನು ಬಂಧಿಸಿದ ರೋಚಕ ಕಥೆ ಬಿಚ್ಚಿಟ್ಟ ಪೊಲೀಸರು

 


ಆಗಸ್ಟ್ 24ರಂದು ಮೈಸೂರಿನಲ್ಲಿ ಒಬ್ಬ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅ.ತ್ಯಾ.ಚಾ.ರ ಪ್ರಕರಣ ಇಡೀ ರಾಜ್ಯದ ಜನತೆಯಲ್ಲಿ ಭಯ ಹುಟ್ಟಿಸಿತ್ತು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಘಟನೆ ನಡೆದಿದ್ದು, ಎಲ್ಲರಿಗೂ ನಡುಕ ತರುವ ಹಾಗೆ ಮಾಡಿತ್ತು, ಇನ್ನುಮುಂದೆ ಮೈಸೂರು ಸುರಕ್ಷಿತ ಸ್ಥಳವಲ್ಲ ಎನ್ನುವ ನಿರ್ಧಾರಕ್ಕೆ ಬರುವ ಹಾಗೆ ಮಾಡಿಬಿಟ್ಟಿತ್ತು, ಆದರೆ ಘಟನೆ ನಡೆದ 85 ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಡಿಜಿ ಐಜಿಪಿ ಪ್ರವೀಣ್ ಸೂದ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ ಕಥೆಯೇ ಬಹಳ ರೋಚಕವಾಗಿದೆ.

ಈ ಕೃ.ತ್ಯಕ್ಕೆ ಕಾರಣವಾದ 6 ಜನರಲ್ಲಿ ಎಲ್ಲರೂ ತಮಿಳುನಾಡಿಗೆ ಸೇರಿದವರಾಗಿದ್ದಾರೆ, ಅವರಲ್ಲಿ ಐವರನ್ನು ಬಂಧಿಸಲಾಗಿದ್ದು, 6ನೇ ಆರೋಪಿಯನ್ನು ಹುಡುಕುವ ಕಾರ್ಯ ನಡೆಯುತ್ತಿದೆ. ಆಗಸ್ಟ್ 24 ರಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಈ ನೀ.ಚ ಕೃ.ತ್ಯ ನಡೆದಿತ್ತು, ಇಂತಹ ಕೆಲಸ ಮಾಡಿ, ಹಣ ಕೇಳಿ ಹಣ ಸಿಗದ ಕಾರಣ ಮೊಬೈಲ್ ಗಳು ಅವರು ಅವರ ಬಳಿ ಇದ್ದ ಹಣವನ್ನು ಕಬಳಿಸಿ, ಆರೋಪಿಗಳು ಪರಾರಿಯಾಗಿದ್ದರು. ಈ ಘಟನೆಯಿಂದ ಹೆಣ್ಣುಮಕ್ಕಳಿಗೆ ಸುರಕ್ಷತೆ ಎಲ್ಲಿ ಎನ್ನುವ ಹಾಗೆ ಆಗಿತ್ತು. ಈ ನೀ.ಚ ಕೃ.ತ್ಯ ಎಸಗಿದವರು ಆರ್.ಎಂ.ಸಿ ಗೆ ಲಾರಿಯಲ್ಲಿ ತಮಿಳುನಾಡಿನಿಂದ ತರಕಾರಿ ಮಾರಾಟಕ್ಕೆ ಬಂದಿದ್ದ ಲಾರಿ ಚಾಲಕನೊಬ್ಬನ ಸ್ನೇಹಿತರಾಗಿದ್ದರು ಎನ್ನಲಾಗಿದೆ.

ಯುವತಿಯು ನನ್ನನ್ನು ಏನು ಕೇಳಬೇಡಿ ಎಂದು ಕೈಮುಗಿದ ನಂತರ ಪೊಲೀಸರು ಆಕೆಯನ್ನು ಯಾವ ಪ್ರಶ್ನೆಯನ್ನು ಕೇಳಿಲ್ಲ. ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿ ಅಲ್ಲಿ ಸಿಕ್ಕಿದ ಬಸ್ ಟಿಕೆಟ್ ಒಂದನ್ನು ಆಧಾರವಾಗಿ ಇಟ್ಟುಕೊಂಡು ಅದರ ಮೂಲಕ ಹುಡುಕಾಟ ನಡೆಸಿದಾಗ, ಐವರು ಕೂಡ ತಮಿಳುನಾಡಿನ ತಿರುಪುರಕ್ಕೆ ಸೇರಿದವರು ಎಂದು ಗೊತ್ತಾಗಿದೆ. ತಮಿಳುನಾಡಿಗೆ ಹೊರಟ ಪೊಲೀಸರು, ಅವರುಗಳನ್ನು ಹುಡುಕಿ ಅಲ್ಲಿಯೇ ಅವರಿಗೆ ಒಂದಷ್ಟು ಗೂಸಾ ಕೊಟ್ಟು, ಗ್ರಹಚಾರ ಬಿಡಿಸಿ ಕರ್ನಾಟಕಕ್ಕೆ ಎಳೆದು ತಂದಿದ್ದಾರೆ.

ಈ ಐವರು ಆರೋಪಿಗಳು ಕೂಡ 20 ವರ್ಷ ಮತ್ತು ಅದಕ್ಕಿಂತ ಚಿಕ್ಕವರು ಎನ್ನಲಾಗುತ್ತಿದೆ. ಅದರಲ್ಲೂ ಒಬ್ಬ 17 ವರ್ಷದ್ ಯುವಕನಾಗಿದ್ದಾನೆ. ಇವರಲ್ಲಿ ಎಲ್ಲರೂ ವಾಹನ ಚಾಲಕರು, ಕೂಲಿ ಕೆಲಸ ಮಾಡುವವರು, ವೈರಿಂಗ್ ಕೆಲಸ ಮಾಡುವವರೇ ಆಗಿದ್ದಾರೆ. ಇವರುಗಳಿಗೆ ಕೋರ್ಟ್ ಸರಿಯಾದ ಶಿಕ್ಷೆ ಕೊಡಲಿ ಎನ್ನುವುದು ಎಲ್ಲರ ಬೇಡಿಕೆ ಆಗಿದೆ. ಆರೋಪಿಗಳನ್ನು ಬಂಧಿಸುವ ಈ ಕಾರ್ಯದಲ್ಲಿ ಮಹತ್ವದ ಪಾಲು ಡಿಜಿ ಐಜಿಪಿ ಆಗಿರುವ ಐಪಿಎಸ್ ಆಫೀಸರ್ ಪ್ರವೀಣ್ ಸೂದ್ ಅವರದ್ದು.

ಆರೋಪಿಗಳನ್ನೆಲ್ಲ ಬಂಧಿಸಿದ ನಂತರ ಎಲ್ಲಾ ಘಟನೆಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿ, ಯಾರು ಭಯಪಡಬೇಕಾಗಿಲ್ಲ ಎಂದು ಧೈರ್ಯ ನೀಡಿದ್ದಾರೆ. ಇಂದಿಗೂ ಕೂಡ ಮೈಸೂರು ಸುರಕ್ಷಿತ ಸ್ಥಳ, ಒಂದು ಘಟನೆಯಿಂದ ಮೈಸೂರು ಸುರಕ್ಷಿತ ಸ್ಥಳವಲ್ಲ ಎಂದು ಪರಿಗಣಿಸಬೇಡಿ ಎಂದಿದ್ದಾರೆ ಪ್ರವೀಣ್ ಸೂದ್ ಅವರು. ಪೊಲೀಸರು ತಮ್ಮ ಕೆಲಸವನ್ನು ಮಾಡಿದ್ದಾರೆ, ಇನ್ನು ನ್ಯಾಯಲಾಯದ ತೀರ್ಪು ಏನಾಗುತ್ತದೆ ಎಂಬುದನ್ನು ನೋಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಆ ಹುಡುಗಿಯ ಪರಿಸ್ಥಿತಿ ಮತ್ತು ಆಕೆಯ ಕುಟುಂಬದ ನೋವು ಹೇಳತೀರದ್ದಾಗಿದೆ.