ಅಪ್ಪನ ಜೊತೆ ಜಗಳ ಆಡಿಕೊಂಡು ಮನೆಯಿಂದ ಹೊರಹೋಗಿ ವಾಪಸ್ ಮನೆಗೆ ಬರುವ ವೇಳೆಗೆ ಅಪ್ಪನನ್ನೇ ಕಳೆದುಕೊಂಡಿದ್ದ ನನ್ನರಸಿ ರಾಧೆ ಅಭಿನವ್ !


 ಬಿಗ್ ಬಾಸ್ ಕನ್ನಡ ಸೀಸನ್ 8 ಮುಗಿದ ನಂತರ ಬಿಗ್ ಬಾಸ್ ಮನೆಯನ್ನು, ಸ್ಪರ್ಧಿಗಳನ್ನು ಮತ್ತು ಬಿಗ್ ಬಾಸ್ ಕೊಡುತ್ತಿದ್ದ ಟಾಸ್ಕ್ ಗಳನ್ನು ಮಿಸ್ ಮಡಿಕೊಳ್ಳುತ್ತಿರುವ ವೀಕ್ಷಕರಿಗಾಗಿ ಬಿಗ್ ಬಾಸ್ ಹೊಸ ರೂಪದಲ್ಲಿ ಶುರುವಾಗಿದೆ. ಬಿಗ್ ಬಾಸ್ ಫ್ಯಾಮಿಲಿ ಮಿನಿ ಸೀಸನ್ ಎಂದು ಹೆಸರಿಡಲಾಗಿದೆ. ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿ ತಾರೆಗಳಾದ ಕನ್ನಡತಿ ಖ್ಯಾತಿಯ ಹರ್ಷ, ನನ್ನರಸಿ ರಾಧೆಯ ಅಗಸ್ತ್ಯ ಮತ್ತು ಇಂಚರ, ಮಂಗಳಗೌರಿ ಮದುವೆ ಖ್ಯಾತಿಯ ರಾಜೀವ್, ಗಿಣಿರಾಮ ಖ್ಯಾತಿಯ ಮಹತಿ ಶಿವರಾಂ ಸೇರಿದಂತೆ ಕಲರ್ಸ್ ಕುಟುಂಬದ 15 ಕಿರುತೆರೆ ತಾರೆಯರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.

ಈಗ ಇವರಿಗೆಲ್ಲ ಬಿಗ್ ಬಾಸ್ ಟಾಸ್ಕ್ ಗಳನ್ನು ನೀಡಿ ಆಟ ಆಡಿಸುತ್ತಿದ್ದಾರೆ. ಬಿಗ್ ಬಾಸ್ ನೀಡುತ್ತಿರುವ ಟಾಸ್ಕ್ ಗಳು ಒಂದು ಕಡೆಯಾದರೆ, ತಮ್ಮ ಮೆಚ್ಚಿನ ಸೀರಿಯಲ್ ತಾರೆಯರು ನಿಜ ಜೀವನದಲ್ಲಿ ಹೇಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಜನರಲ್ಲಿ ಇದೆ. ಇತ್ತೀಚೆಗೆ ಬಿಗ್ ಬಾಸ್ ಎಲ್ಲಾ ಸದಸ್ಯರ ಜೀವನದಲ್ಲಿ ನಡೆದ ನೋವಿನ ಘಟನೆಗೆಳ ಬಗ್ಗೆ ಹಂಚಿಕೊಳ್ಳಬೇಕು ಎಂದು ಟಾಸ್ಕ್ ನೀಡಿದ್ದರು, ಅದರಲ್ಲಿ ನನ್ನರಸಿ ರಾಧೆ ಧಾರವಾಹಿಯ ಅಗಸ್ತ್ಯ ಅಲಿಯಾಸ್ ಅಭಿನವ್ ತಮ್ಮ ತಂದೆಯನ್ನು ಕಳೆದುಕೊಂಡ ಕ್ಷಣದ ಬಗ್ಗೆ ಮಾತನಾಡಿ ಎಲ್ಲರೂ ಭಾವುಕರಾಗುವ ಹಾಗೆ ಮಾಡಿದ್ದಾರೆ.

ಅಗಸ್ತ್ಯ ಅವರ ಪೂರ್ತಿ ಹೆಸರು, ಅಭಿನವ್ ವಿಶ್ವನಾಥನ್ ಸಾಯಿ ಆದಿತ್ಯ ಕೃಷ್ಣ. ಇವರು ಹುಟ್ಟಿ ಬೆಳೆದಿದ್ದು ದೆಹಲಿಯಲ್ಲಿ. ಕೆಲ ವರ್ಷಗಳ ನಂತರ ಬೆಂಗಳೂರಿಗೆ ಬಂದರು. ಆಗ ಅಭಿನವ್ ಅವರಿಗೆ ಕನ್ನಡ ಬರುತ್ತಿರಲಿಲ್ಲ ಮತ್ತು ಅವರು ಬಹಳ ದಪ್ಪವಾಗಿದ್ದ ಕಾರಣ ಎಲ್ಲರೂ ಅಭಿನವ್ ಅವರನ್ನು ಟೀಕಿಸುತ್ತಿದ್ದರು. ಅದನ್ನು ಸಹಿಸಿಕೊಳ್ಳುತ್ತಿದ್ದರು ಅಭಿನವ್. ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿದ್ದರು. ಅಭಿನವ್ ಅವರಿಗೆ ಕಲೆ, ಸಂಗೀತ, ನಟನೆಯಲ್ಲಿ ಆಸಕ್ತಿ ಇತ್ತು. ಹಾಗೂ ಅಭಿನವ್ ಅವರಿಗೆ ಡಾಕ್ಟರ್ ಆಗುವ ಕನಸು ಇತ್ತು. ಸಿಇಟಿ ಯಲ್ಲಿ ಬಂದ ಅಂಕದಿಂದ ಮೆಡಿಸಿನ್ ಓದಲು ಆಗುವುದಿಲ್ಲ ಎಂದು ಇಂಜಿನಿಯರಿಂಗ್ ಸೇರಿದರು ಅಭಿನವ್.

ಇಂಜಿನಿಯರಿಂಗ್ ಎರಡನೇ ವರ್ಷದಲ್ಲಿದ್ದಾಗ ಒಂದು ದಿನ ಅವರು ತಾಯಿ ಜೊತೆ ಒಂದು ಮದುವೆಗೆ ದೆಹಲಿಗೆ ಹೋಗಬೇಕಿತ್ತು, ಅದೇ ದಿನ ಒಂದು ಸಣ್ಣ ವಿಷಯ ದೊಡ್ಡದಾಗಿ ತಂದೆ ಜೊತೆ ದೊಡ್ಡ ಜಗಳ ಆಡಿಕೊಂಡು ದೆಹಲಿಗೆ ಹೊರಟರು. ದೆಹಲಿಗೆ ಹೊರಟ ನಂತರ ತಂದೆಗೆ ಸೀರಿಯಸ್ ಆಗಿರುವ ವಿಚಾರ ಗೊತ್ತಾಗಿ, ವಾಪಸ್ ಮನೆಗೆ ಬರುವಷ್ಟರಲ್ಲಿ ಅವರ ತಂದೆ ನಿ.ಧ.ನ.ರಾಗಿದ್ದರು. ಈಗ ತಾನೇ ಜಗಳ ಆಡಿಕೊಂಡು ಹೋಗಿದ್ದೆ ಬರುವಷ್ಟರಲ್ಲಿ ಹೀಗಾಗಿದೆ ಎಂದು ಅಭಿನವ್ ಅವರಿಗೆ ಶಾಕ್ ತಡೆದುಕೊಳ್ಳಲು ಆಗಿಲ್ಲ.

ತಂದೆ ಜೊತೆ ಜಗಳ ಆಡಿದಕ್ಕೆ ಹೇಗೆ ಕ್ಷಮೆ ಕೇಳುವುದು ಎಂದು ಸಹ ಅವರಿಗೆ ಗೊತ್ತಾಗಲಿಲ್ಲ. ತಂದೆಯ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ ಅಭಿನವ್. ಒಮ್ಮೆ ಅವರ ತಂದೆ ಕನಸಿನಲ್ಲಿ ಬಂದಾಗ, ಯಾಕೆ ನನ್ನನ್ನು ಬಿಟ್ಟು ಹೋಗ್ಬಿಟ್ರಿ ಎಂದು ಕೇಳಿದಾಗ, ‘ನೀನು ಕನಸಲ್ಲಿ ಇದ್ದೀಯ ನಾನು ವಾಸ್ತವಾದಲ್ಲಿದ್ದೇನೆ..’ ಎಂದು ಅವರ ತಂದೆ ಹೇಳಿದ್ದರಂತೆ. ಅದರ ಅರ್ಥ “ಅವರು ನನ್ನ ಜೊತೆಯಲ್ಲೇ ನನ್ನೊಳಗೆ ಇದ್ದಾರೆ, ಎನ್ನುವುದು ನನಗೆ ಸಮಯ ಕಳೆಯುತ್ತಾ ಅರ್ಥವಾಯಿತು..” ಎಂದು ಹೇಳುತ್ತಾರೆ ಅಭಿನವ್. ಇದು ಅಭಿನವ್ ಅವರ ಜೀವನದ ನೋವಿನ ಕಥೆ.